2009/11/20

ಪಯಣ

ಕಣ್ಣೆದುರಿಗೊಂದು ಕರಿ ಪರದೆ
ಅದರಾಚೆಗಿನ ಹಾದಿ ಬಲು ನಿಗೂಢ
ಇಣುಕಿ ನೋಡಬೇಕೆಂಬ ಹಂಬಲ
ಆದರಿಣುಕಲಸಾಧ್ಯ!
ಏನೆಣಿಸಿದರೂ ಅದು ಬರಿ ಕನಸು

ನಡೆದು ಬಂದ ಹಾದಿಯ ಮುಸುಕು ಚಿತ್ರ
ಹೂವು-ಹಣ್ಣು, ಜೊತೆಗೆ ಕಲ್ಲು-ಮುಳ್ಳು
ಹಿಂದಿರುಗಿ ಅಲೆಯಬೇಕೆಂಬ ಬಯಕೆ
ಆದರಲೆಯುವುದಸಾಧ್ಯ!
ಏನೆಣಿಸಿದರೂ ಅದು ಬರಿ ನೆನಪು

ಮುಂದಿಣುಕುವಂತಿಲ್ಲ ಹಿಂದಿರುಗುವಂತಿಲ್ಲ
ಮತ್ತೇಕೆ ಅವುಗಳ ಚಿಂತೆ?
ಕನಸು-ನೆನಪುಗಳ ನಡುವೆ
ಪಯಣದ ಸವಿಯ ಮರೆಯುವಿಯೇಕೆ?

6 comments:

Anonymous said...

ಕನಸು-ನೆನಪುಗಳ ಜೊತೆಯಿಲ್ಲದ ಪಯಣಕೆ ಅರ್ಥವಿರುವುದಿಲ್ಲ, ದಿಕ್ಕೂ ತೋಚುವುದಿಲ್ಲ. ಅದರ ಸವಿಯನು ಆಸ್ವಾದಿಸುವ ಬಯಕೆಯೂ ಇರುವಿದಿಲ್ಲ :).

ಸಂಕ್ಷಿಪ್ತ said...

ಖಂಡಿತಾ ನಿಜ. ಕನಸು-ನೆನಪುಗಳು ಪಯಣದ ಮುಖ್ಯಾಂಶಗಳೇ, ಆದರೆ ಅವುಗಳೇ ಪಯಣದ ಸವಿಯೆಂದು ತಿಳಿಯಬಾರದು.

Dileep Hegde said...

ಚೆನ್ನಾಗಿದೆ.. :)

Anonymous said...

ಕನಸು-ನೆನಪುಗಳ ಹೊರೆತುಪಡೆಸಿ, ಪಯಣದ ‍ಸವಿಯನು ಬಗೆಯುವುದು ಹೇಗೆ?

ಸಂಕ್ಷಿಪ್ತ said...
This comment has been removed by the author.
ಸಂಕ್ಷಿಪ್ತ said...

ನೆನಪುಗಳ ತುಂಟತನದ ಕಚಗುಳಿ ಹಾಗೂ ಕನಸಿನ ರಸಭರಿತ ಬಣ್ಣನೆಗಳಿಲ್ಲದೆ ವಾಸ್ತವ ಸಪ್ಪೆಯೆನ್ನುವುದು ಖಂಡಿತಾ ನಿಜ. ಇಲ್ಲಿ ಬರೆದಿರುವುದು ಬೇರೊಂದು ದೃಷ್ಟಿಕೋನದಿಂದ. ಉದಾಹರಣೆಗೆ, "ಈಗ ದಿನವಿಡೀ ಕೆಲಸ ಮಾಡಿ, ದುಡ್ಡು ಮಾಡಿಕೊಂಡು, ಇನ್ನೊಂದೈದು ವರ್ಷದ ನಂತರ ಎಲ್ಲಾ ಕಡೆ ಸುತ್ತಾಡುವೆ" ಎಂದು ಹೇಳುವವರನ್ನು ಗಮನದಲ್ಲಿಟ್ಟುಕೊಂಡು ಬರೆದದ್ದು.