2009/07/31

ಮುನ್ನುಡಿ

ಹಿಂದಿನ ಅನುಭವ, ಇಂದಿನ ವಿಚಾರ, ಮುಂದಿನ ಕನಸು;
ಜೊತೆಗೆ ಸುದ್ಧಿ-ಸಮಾಚಾರ, ಸ್ವಲ್ಪ ಸಿನೆಮಾ, ಆಟ, ತಿರುಗಾಟ ಇತ್ಯಾದಿ;
ಎಲ್ಲಾ ಬರೆಯೋಣವೆಂದರೆ ... ಸಮಯವೇನೋ ಇದೆ
ಆದರೆ ಸಂಯಮದ ಕೊರತೆ.
ಬರೆಯದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ
ಕೆಲಸವೊಂದು ಅರ್ಧಕ್ಕೆ ನಿಂತಂತೆ.

ಅದಕ್ಕೊಂದು ಉಪಾಯ: ಬರವಣಿಗೆಯಲ್ಲಿ
ವಿಷಯವಿರಬೇಕು, ವರ್ಣನೆಯಿರಬಾರದು;
ವಿಚಾರವಿರಬೇಕು, ಹರಟೆಯಿರಬಾರದು;
ತಿರುಳಿರಬೇಕು, ವಿವರಗಳಿರಬಾರದು;
ವೈಶಿಷ್ಟ್ಯವಿರಬೇಕು, ವೈಚಿತ್ರ್ಯವಿರಬಾರದು;
ಭಾವನೆಗಳ ಸ್ಥೂಲ ರೂಪವಿರಬೇಕು, ಭಾವುಕತೆಯಿರಬಾರದು;

ಹೆಚ್ಚೆಂದರೆ ಹದಿನಾಲ್ಕು ಸಾಲಿರಬೇಕು, ಅದಕ್ಕಿಂತ ಹೆಚ್ಚಿರಬಾರದು;
ಇದೇ ಪುಟಾಣಿ ಬರಹ.

7 comments:

Manju said...

"ಸ್ವಾರಸ್ಯ"ಕ್ಕೂ ಒ೦ದ್ ಚೂರು ಜಾಗ ಇದ್ರೆ ಛೊಲೋ ಅಲ್ವ? :)

ಸಂಕ್ಷಿಪ್ತ said...

ನಿಜ. ಸ್ವಾರಸ್ಯಕ್ಕೆ ಖಂಡಿತವಾಗಿಯೂ ಮನ್ನಣೆ ಕೊಡುವೆ.

Keerthi said...

ಹದಿನಾಲ್ಕೇ ಏಕೆ?

ಸಂಕ್ಷಿಪ್ತ said...

ಹೆಚ್ಚೆಂದರೆ ಹದಿನಾಲ್ಕು ಅಂತ. ಹದಿನಾಲ್ಕು ಸಾಲುಗಳಾದರೆ ವಿಂಗಡಣೆಗೆ ಸಾಧ್ಯತೆಗಳು ಜಾಸ್ತಿ ಎನಿಸಿತು. ಹಾಗಾಗಿ.

ಹೆಸರು: ಕಾಳು said...

brevity is the soul of wit.

ಆರಾಮ said...

ಸಂಕ್ಷಿಪ್ತರವರೇ,

ಅಭಿನಂದನೆಗಳು, ನಿಮ್ಮ ವಿನೂತನ , ಪ್ರಯೋಗಶೀಲ, ನಿಮ್ಮದೇ ಆದ ಹೊಸ ಬ್ಲಾಗನ್ನು ಹೊಂದಿರುವದಕ್ಕಾಗಿ.
ಹದಿನಾಲ್ಕೇ ಸಾಲುಗಳಲ್ಲಿ ನೀವು ಹೇಳಬೇಕಾಗಿರುವದನ್ನು ಹಿಡಿದಿಡುವ ನಿಮ್ಮ ಹಟದ ಸಾಧನೆ ನಿಜಕ್ಕೂ ಅದ್ಭುತ.
ನಿಮ್ಮ ಈ ಸಾಹಸ ನೋಡಿ ಅಮಿತ್ ವರ್ಮಾರವರ indiauncut.com ನಲ್ಲಿ blogging tips from a jaded veteran ಬರಹ ನೆನಪಾಯಿತು. "To be a successful blogger, thus, there is just one rule you need to remember: Respect your reader’s time. Any advice I can give you on writing a widely-read blog flows from that one rule."

ಸಂಕ್ಷಿಪ್ತ said...

ಧನ್ಯವಾದಗಳು