2009/08/02

ಅಜ್ಞಾತವಾಸದ ಬಳಿಕ

ಹದಿನಾಲ್ಕು ವರ್ಷದ ಹಿಂದಿನ ನೆನಪು ಕೆದಕಿ "ಈಗ ಅವಳೆಲ್ಲಿ?" ಎಂದು ಕೇಳಿದಾಗ
ಹಳೆ ಕಾಗದ ನೋಡಿ ಮಿಸ್ಸು ಹೇಳಿದ್ದು " ಹೈಸ್ಕೂಲಿಗೆ ಸೇರಿದ್ದಳು"; ಮೊಗದಲ್ಲಿ ಅದೇ ಹಿಂದಿನ ನಗುವಿತ್ತು.

ಪ್ಯೂನಿಗೆ ಐದು, ಗುಮಾಸ್ತನಿಗೆ ಹತ್ತು, ಜೊತೆಗೆ ಒಂದಿಷ್ಟು ಸುಳ್ಳು ಸೇರಿಸಿ ಶೋಧನೆ ಮುಂದುವರೆಸಿದಾಗ
"ಅವಳು ನಮ್ಮ ಕಾಲೇಜಿನಲ್ಲೇ ಪಿ.ಯು.ಸಿ ಮಾಡಿದ್ದು"; ಎಲ್ಲೆಲ್ಲೂ ಉದಾಸೀನತೆಯಿತ್ತು.

ಈಗಾಗಲೇ ಕೊಟ್ಟಿರುವ ಭಕ್ಷೀಸಿನ ನೆಪ ಒಡ್ಡಿ ಮತ್ತೊಮ್ಮೆ ಕಡತಗಳನ್ನು ಹುಡುಕಿಸಿದಾಗ
"ನಂತರ ಕಾಲೇಜಿನಲ್ಲಿ ಬಿ.ಎ ಮಾಡಲು ಹೋದಳು"; ಉದಾಸೀನತೆ ಸಿಟ್ಟಾಗಿತ್ತು.

ಕಾಲೇಜಿನ ಕನ್ನಡ ಅಧ್ಯಾಪಕರ ಬಳಿ ಅವರ ಶಿಷ್ಯೆಯಾಗಿದ್ದ ಅವಳ ಬಗ್ಗೆ ಕೇಳಿದಾಗ
"ಅವಳ ನೆನಪಿಲ್ಲ, ಅದೇ ಕ್ಲಾಸಿನ ಇನ್ನೊಬ್ಬಳು ನಮ್ಮ ರಸ್ತೆಯಲ್ಲೇ ಇರುವುದು"; ಉತ್ತರದಲ್ಲಿ ನಿರ್ಲಿಪ್ತತೆಯಿತ್ತು.

ಇನ್ನೊಬ್ಬಳ ಮನೆ ಹುಡುಕಿ, ಅಧ್ಯಾಪಕರ ಹೆಸರೆತ್ತಿ ಸಹಪಾಠಿಯ ವಿಳಾಸ ಕೇಳಿದಾಗ
"ಅವಳ ಪರಿಚಯ ಕಮ್ಮಿ, ಮತ್ತೊಬ್ಬಳನ್ನು ಕೇಳಿ"; ಆಶ್ಚರ್ಯ ಮನೆಮಾಡಿತ್ತು.

ಮತ್ತೊಬ್ಬಳ ಮನೆಗೆ ನಾಲ್ಕೈದು ದಿನ ಅಲೆದು, ಕೊನೆಗೊಮ್ಮೆ ಸಿಕ್ಕಾಗ
"ಸಿಕ್ಕಿ ಎರಡು ವರ್ಷವಾಯಿತು, ಇದು ಅವಳ ವಿಳಾಸ"; ಸ್ವಲ್ಪ ಕುತೂಹಲವಿತ್ತು.

ಕರೆಗಂಟೆಯ ಸದ್ದು, ತೆರೆದ ಬಾಗಿಲು, ಪರಿಚಯ, ಒಳಗೆ ಬಾ ಎಂಬ ಆಮಂತ್ರಣ
ಒಳಗೆ ಕಾಲಿಡುತ್ತಿದ್ದಂತೆ ಎದುರಿಗೆ ಅವಳ ಅಂದವಾದ ಭಾವಚಿತ್ರ ... ಅದರ ಮೇಲೆ ಹೂವಿನ ಹಾರವಿತ್ತು.

3 comments:

Manju said...

"ಅಜ್ಞಾತವಾಸದ ಬಳಿಕ" ಓದಿ ಮನಸ್ಸಿಗೆ ಯಾಕೋ ಬೇಸರವಾಯಿತು :(, ನನಗೆ 'Happy endings' ಸ್ವಲ್ಪ ಜಾಸ್ತಿ ಇಷ್ಟ :)

ಸಂಕ್ಷಿಪ್ತ said...

ವಾಸ್ತವದಲ್ಲಿ ಎಲ್ಲಾ ಘಟನೆಗಳು ಸುಖಾಂತ್ಯವೇ ಆಗಿರುವುದಿಲ್ಲವಲ್ಲ. ಎಲ್ಲ ಕಥೆಗಳನ್ನೂ ಸುಖಾಂತ್ಯ ಮಾಡಿದರೆ ಸ್ವಾರಸ್ಯ ತುಸು ಕಡಿಮೆಯಾಗುತ್ತದೆಯಲ್ಲವಾ?

Keerthi said...

ಚೆ :’(