2009/08/06

ಸಂಗೀತ

ಬೆಂಗಳೂರಿನ ಇನ್ನೊಂದು ತುದಿಯಲ್ಲಿ ಗಾನಸುಧೆಯೆಂದು ಕೇಳಿ
ಒಂದು ಗಂಟೆ ಮುಂಚಿತವಾಗಿಯೇ ಬೈಕಿನಲ್ಲಿ ಹೊರಟಿದ್ದೆ
ಎಲ್ಲೆಲ್ಲೂ ವಾಹನಗಳು ಕೆಂಪು-ಹಸಿರು ದೀಪಗಳನ್ನನುಸರಿಸುತ್ತಿದ್ದವು.

ತಡವಾಗಿ ತಲುಪಿದರೂ ವರ್ಣವಿನ್ನೂ ಮುಗಿದಿರಲಿಲ್ಲ
ಕಲ್ಯಾಣಿಯಲ್ಲಿ ಆಲಾಪನೆ, ನೆರುವಲ್, ಸ್ವರಪ್ರಸ್ತಾರ
ನಂತರ ಭೈರವಿಯಲ್ಲಿ ರಾಗ, ತಾನ, ಪಲ್ಲವಿ
ಕನ್ನಡಿಗರೆದುರು ಎಂದು ಕೃಷ್ಣ ನೀ ಬೇಗನೆ ಬಾರೋ
ಕೊನೆಯಲ್ಲಿ ಶಾಸ್ತ್ರದಂತೆ ಪವಮಾನದ ಮಂಗಳ.
ಎಲ್ಲಾ ಅದ್ಭುತ, ಅತ್ಯದ್ಭುತ!

ವಾಪಾಸಾಗುವಾಗ ಮತ್ತದೇ ಟ್ರಾಫಿಕ್ ಗೋಳು
ಬಸ್ಸು, ಕಾರು, ಲಾರಿಗಳ ಮೆರವಣಿಗೆ
ರಿಂಗ್ ರೋಡ್ ಉದ್ದಕ್ಕೂ ಹೊಗೆ, ಧೂಳು.

ರಾತ್ರಿ ಮಲಗುವಾಗಲೂ ಭೈರವಿಯಲ್ಲೇ ಗುನುಗುನಿಸುತ್ತಿದ್ದೆ
ಕನಸಿನಲ್ಲಿ ಮಾತ್ರ ವಾಹನಗಳದೇ ಅಬ್ಬರ.

3 comments:

Anonymous said...

You have written nicely. Is there any restrictions for 14 lines? Is it the influence of Shakespeare's sonnets? All the best
Ram

ಸಂಕ್ಷಿಪ್ತ said...

ಪ್ರತಿಕ್ರಿಯೆಗೆ ಧನ್ಯವಾದಗಳು. ಹದಿನಾಲ್ಕೇ ಸಾಲುಗಳ ನಿರ್ಬಂಧ ನಾನೇ ಹಾಕಿಕೊಂಡಿದ್ದು. ಸಾನೆಟ್ಟಿನಿಂದ ಪ್ರೇರಿತನಾಗಿದ್ದಲ್ಲ. ಹದಿನಾಲ್ಕು ಸಾಲುಗಳಾದರೆ ಸಾಲುಗಳ ವಿಂಗಡಣೆಗೆ ಸಾಧ್ಯತೆಗಳು ಹಲವು ಎಂದು ಲೆಕ್ಕಿಸಿ ಆರಂಭಿಸಿದ್ದು.

Manju said...

nimage sangeetada gandhavU ide anta gottiralilla(:P), Odi khushiyAyitu :)