2009/08/24

ಭೇದ

ಜೂಗೆ ಹೋಗುವಾಗ ದಾರಿಯಲ್ಲಿ
ತಿಮ್ಮ ಸ್ನೇಹಿತನಿಗೆ ಬುದ್ಧಿ ಹೇಳುತ್ತಿದ್ದ:
"ಹುಡುಗಿ ನೋಡಲು ಚೆನ್ನಿಲ್ಲ ಎಂದಮಾತ್ರಕ್ಕೆ
ನೀನು ಮದುವೆಗೆ ಒಪ್ಪದಿದ್ದುದು ಸರಿಯಲ್ಲ;
ಅವಳೂ ಮನುಷ್ಯಳಲ್ಲವೆ?
ಅಂದ ಚೆಂದಕೆ ಮಾರುಹೋಗುವುದು ಮೂರ್ಖರ ಲಕ್ಷಣ!"
ಸ್ನೇಹಿತ ಯೋಚಿಸುತ್ತಿದ್ದ.

ಗರಿಗೆದರಿದ ನವಿಲ ನರ್ತನವ ನೋಡಿ ಸ್ನೇಹಿತನೆಂದ:
"ಕೆಲ ದೇಶಗಳಲ್ಲಿ ಇದರ ಮಾಂಸವನ್ನು ತಿನ್ನುವರಂತೆ!"
"ಇಷ್ಟು ಸುಂದರವಾಗಿರುವುದನ್ನು ಕಡಿದು ತಿನ್ನಲು
ಮನಸ್ಸು ಬರುವುದಾದರೂ ಹೇಗೆ" ಎಂದ ತಿಮ್ಮ.
ವಾಪಾಸಾಗುವಾಗ ಊಟಕ್ಕೆ ಹೋಟಲಿಗೆ ಹೋದಾಗ
ತಿಮ್ಮ ಮಾಣಿಗೆ ಚಿಕನ್ ಬಿರಿಯಾನಿ ತರಲು ಹೇಳಿದ.
ಸ್ನೇಹಿತ ಯೋಚಿಸುತ್ತಿದ್ದ.

3 comments:

sunaath said...

‘ಕಿರಿದರೊಳ್ ಪಿರಿದರ್ಥಮಂ ಪೇಳುವ’ ಪುಠಾಣಿ ಬರಹಗಳು ಖುಶಿ ಕೊಟ್ಟವು.

Manju said...

Good example for a Facist+Hypocrit!

ಸಂಕ್ಷಿಪ್ತ said...

ಸುನಾಥ್ ಕಾಕ, "ಕಿರಿದರೊಳ್" ಏನೋ ಸರಿ, ಆದರೆ "ಪಿರಿದರ್ಥಮಂ" ಎಷ್ಟರಮಟ್ಟಿಗೆ ಅನ್ನುವುದು ಗೊತ್ತಿಲ್ಲ.