2009/08/16

ಕರ್ಮಫಲ

ಮಿಸ್ಸು ಹೇಳಿದರೆಂದು ಕಥೆಯೊಂದ ಬರೆದೆ
ಅದರಲೊಬ್ಬಳು ನಾಯಕಿ, ಹದಿ ಹರೆಯದ ತರುಣಿ
ಪ್ರೇಮದಲಿ ಸಿಲುಕಿ ಬರೆದಳೊಂದು ಓಲೆಯ:

"ಏಳು ಜನುಮಗಳ ಜೊತೆಗಾರ,
ನಮ್ಮೀರ್ವರ ಮಿಲನಕೆ ಸಾಕ್ಷಿ ಬೇಕಿಲ್ಲ
ಆದರೆ, ಈ ತಿಂಗಳು ನಾ ಹೊರಗಾಗಿಲ್ಲ!
ಇಂದು ಬರುವೆಯೆಂದು ಕೈಯ ಹಿಡಿಯುವೆಯೆಂದು
ಕಾದು ಕುಳಿತಿಹೆನು ನಾನು
ನೀ ಬಾರದಿದ್ದರೆ ನನ್ನ ಗತಿಯೇನು?
... ಬಹುಶಃ ಕೆರೆಗೋ‌ ಬಾವಿಗೋ ತುತ್ತು."

ಒಂದು ಸಂಜೆ ಶಾಲೆಯಿಂದ ಬಂದೊಡನೆ ಅಯ್ಯೋ! ಬಿತ್ತೊಂದು ಏಟು
ತಿರುಗಿ ನೋಡಿದರೆ ಅಪ್ಪನ ಕೈಯಲ್ಲೊಂದು ಬಾರು ಕೋಲು
ಪಕ್ಕದಲ್ಲಿ ಅಮ್ಮ ಕಣ್ಣೀರಿಡುತ್ತಿದ್ದಳು; ಅವಳ ಕೈಯಲ್ಲೊಂದು ಪತ್ರವಿತ್ತು.

4 comments:

manju said...

ಅಯ್ಯೋ..ಏನಿದು ಕಥೆ???

ಸಂಕ್ಷಿಪ್ತ said...

ಯಾಕೆ, ಏನಾಗಿದೆ? ಹಿಂದಿನ ಎಲ್ಲಾ ಕಥೆಗಳಂತೆ ಇದೂ ಸಹ ನಡೆದ ಘಟನೆಯೊಂದರಿಂದ ಪ್ರೇರಿತನಾಗಿ ಬರೆದದ್ದು!

Keerthi said...

ಹಹಹ... ನಕ್ಕೂ ನಕ್ಕೂ ಸುಸ್ತಾಯ್ತು.

ಹೆಸರು: ಕಾಳು said...

ಯಾರ
ಕರ್ಮಕ್ಕೆ
ಯಾರಿಗೆ ಫಲ!