2009/08/21

ಅಡಗೂಲಜ್ಜಿ ಕಥೆ

ವೀರಕೇಸರಿಯ ಪ್ರೇಮಕಥೆಯ ಕೇಳಿ
ಕರುಣೆಯಿಂದಲಿ ಮರುಗಿದನು
ವರವ ರೂಪದಲಿ ಮಂತ್ರವೊಂದನು ಹೇಳಿ
ಹಾರುವ ಕುದುರೆಯೊಂದ ಕೊಟ್ಟನು
ಏಳು ಸಾಗರವ ದಾಟಿ, ಏಳು ಪರ್ವತಗಳನೇರಿ
ಧೂಳನೆಬ್ಬಿಸುತ ಸಾಗಿತು ಬಿಳಿಕುದುರಿ
ಚಳಿಮಳೆಯ, ಉರಿಬಿಸಿಲ ಲೆಕ್ಕಿಸದೆ
ಅಳುಕಿಲ್ಲದೆ ಓಡಿತು ಮುಂದೆ ಮುಂದೆ
ಕಟ್ಟಕಡೆಗೊಂದು ದಿನ ಮುಸ್ಸಂಜೆ ಹೊತ್ತಿನಲಿ
ದಟ್ಟಡವಿಯೊಂದ ತಲುಪಿದ ಕೇಸರಿ
ಪುಟ್ಟ ಗುಹೆಗೆ ಅಲ್ಲೊಂದು ದಾರಿ
ಅಟ್ಟಹಾಸದ ನಗುವು ಕೇಳಿಸಿತಲ್ಲಿ
ನಿದ್ದೆ ಮಾಡಿ ಅಜ್ಜಿ ಗೊರಕೆ ಹೊಡೆಯುತ್ತಿದ್ದಳು
ಸದ್ದಿಲ್ಲದೆ ಕಥೆಯ ನಿಲ್ಲಿಸಿ ಮುಸುಕೆಳೆದಳು ಮೊಮ್ಮಗಳು

2 comments:

aaraam said...

"ಅಜ್ಜಿಗೆ" ಕಥೆ ಚೆನ್ನಾಗಿದೆ.
ಕಾಲ ಹೇಗೆ ಬದಲಾಗಿವೆ !!!
ಹೊಸ, ಹೊಸ ಟೆಕ್ನೋಲೋಜಿ ಕರಗತ ಮಾಡಿದ ಎಳೆಮಕ್ಕಳು ಅಜ್ಜಿಗೇ ಕತೆ ಹೇಳುವಷ್ಟು ಜಾಣರಾಗಿದ್ದಾರೆ.
ಹಾಗೆಂದು ಅಜ್ಜಿಯ ಮೇಲಿನ ಪ್ರೀತಿ ಏನೇನೂ ಬದಲಾಗಿಲ್ಲ!!!

ಹಾಸ್ಯಬರಹದಲ್ಲೂ ಇಷ್ಟೊಂದು ಒಳನೋಟಗಳಿರುವುದು ನಿಮ್ಮ ಪ್ರತಿಭೆ ಕಾರಣ.

ಸಂಕ್ಷಿಪ್ತ said...

ಧನ್ಯವಾದಗಳು